Tuesday, 13 August 2013
Monday, 24 June 2013
ದೀರ್ಘಾಯುಷ್ಮಾನ್ಭವ!
ಮುಂದಿನ ಬಾರಿ ನಿಮ್ಮನ್ನು
“ದೀರ್ಘಾಯುಷ್ಮಾನ್ಭವ” ಅಥವಾ “ದೀರ್ಘಸುಮಂಗಲೀಭವ” ಎಂದು ಮಹಭಾರತ, ರಾಮಾಯಣ
ಇತ್ಯಾದಿ ಸಿರಿಯಲ್ಲುಗಳ ಶೈಲಿಯಲ್ಲಿ ಆಶೀರ್ವದಿಸಿದಾಗ ಒಂದಿಷ್ಟು ಮುಜುಗರವಾಗುವುದು ಬಿಟ್ಟು ಇನ್ನೂ ಒಂದು
ಹೊಸ ಸಾಧ್ಯತೆಗೆ ಅವಕಾಶವಿದೆ. ಅದೇನೆಂದರೆ ಆ ಆಶೀರ್ವಚನ ಸತ್ಯವಾಗಲೂಬಹುದು!
ಏಕೆಂದರೆ ದೀರ್ಘಾಯುಷ್ಯದ ರಹಸ್ಯವನ್ನು
ವಿಜ್ಞಾನಿಗಳೀಗ ಬೇದಿಸಿ ಬಿಟ್ಟಿದ್ದಾರೆ! ಸಂತೋಷವಾಯ್ತು?
ಆಗದೇ ಏನು? ದೀರ್ಘಾಯುಷ್ಯವನ್ನು ಪಡೆಯುವುದು
ನಾವು-ನೀವೆಲ್ಲರೂ ಗುಟ್ಟಾಗಿ ಪೋಷಿಸಿಕೊಂಡು ಬಂದಿರುವ ಎರಡನೇ ಅತಿದೊಡ್ಡ
ಕನಸು. ಮೊದಲನೆಯದು ಯಾವುದೆಂದು ನೀವು ಕೇಳಬೇಕಿಲ್ಲ, ನಾನೇ
ಹೇಳುತ್ತೇನೆ.... ಅದೇನೂ ನಿಮಗೆ ಗೊತ್ತಿಲ್ಲದ್ದಲ್ಲ
- ಸಾವನ್ನು ಗೆದ್ದು ಸದಾ ಬದುಕೇ
ಇರಬೇಕೆಂಬ ಕನಸು. ಅಮೃತದ ಕಥೆ ಹುಟ್ಟಿಕೊಂಡಿದ್ದೇ
ಈ ಕನಸಿನಿಂದಾಗಿ.
ವೈದ್ಯಕೀಯ ವಿಜ್ಞಾನದಲ್ಲಾದ ಅನೇಕ ಸಂಶೋಧನೆಗಳು ಮಾನವನ
ಸರಾಸರಿ ಜೀವಿತದ ಅವಧಿಯನ್ನು ವಿಶ್ವದೆಲ್ಲೆಡೆ
ಬಹಳಷ್ಟು ಹೆಚ್ಚಿಸಿದೆ
ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೂ ಆರೋಗ್ಯವಂತನೊಬ್ಬನ
ಜೀವಿತಾವಧಿಯನ್ನು ಹೆಚ್ಚಿಸುವಂತಹ ಯಾವ ಸಂಶೋಧನೆಯೂ ಇದುವರೆಗೆ
ಫಲಪ್ರದವಾಗಿರಲಿಲ್ಲ. ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ನಿಟ್ಟಿನಲ್ಲಿ ಒಂದು
ದೊಡ್ಡ ಹೆಜ್ಜೆಯನ್ನಿಟ್ಟು ಇಡೀ ಜಗತ್ತು ಆಸೆಗಳಿಂದ
ಅವರತ್ತ ನೋಡುವಂತೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ “ಸೈಯನ್ಸ್” ಪತ್ರಿಕೆಯ
ಅಂತರ್ಜಾಲ ಸಂಚಿಕೆಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ
ಜೀವಿತಾವಧಿಯನ್ನು ಹೆಚ್ಚಿಸಬಲ್ಲ ನೈಸರ್ಗಿಕ ಹಾರ್ಮೋನೊಂದನ್ನು ಟೆಕ್ಸಾಸ್ನ ಡಾ| ಮಕಟೋ
ಕುರೋಓ ಮತ್ತು ಅವರ ಸಹೋದ್ಯೋಗಿಗಳು
ಪತ್ತೆ ಮಾಡಿರುವುದನ್ನು ಬಹಿರಂಗ ಪಡಿಸಲಾಗಿದೆ. ಪತ್ತೆಯಾದ
ಈ ಹೊಸ ಹಾರ್ಮೋನಿಗೆ
“ಕ್ಲೋಥೋ”
ಎಂದು ನಾಮಕರಣ ಮಾಡಲಾಗಿದೆಯಂತೆ. ಹೆಸರು
ಯಾವುದೇ ಇಟ್ಟಿದ್ದರೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ ಬಿಡಿ. “ಕ್ಲೋಥೋ” ಎಂಬುದು
ಗ್ರೀಕ್ ಮಿಥಕಗಳಲ್ಲಿ ಮಾನವನ ವಯಸ್ಸನ್ನು ನಿರ್ಧರಿಸುವ
ವಿಧಿ.
ಅನೇಕ ಪ್ರಭೇದದ ಜೀವಿಗಳಲ್ಲಿ
ಮೆದುಳು ಮತ್ತು ಮೂತ್ರ ಕೋಶಗಳಲ್ಲಿ
ಉತ್ಪಾದಿಸಲ್ಪಟ್ಟು ನಂತರ ರಕ್ತ ಪ್ರವಾಹದಲ್ಲಿ
ಸೋರಿಹೋಗುವ ಈ “ಕ್ಲೋಥೋ” ಎಂಬ ಚೋದಕ ದ್ರವ್ಯದ
ಬೆನ್ನು ಹತ್ತಿಹೋದ ಕಥೆ ಯವುದೇ ಪತ್ತೆದಾರಿ
ಕಾದಂಬರಿಗೂ ಕಡಿಮೆ ಇಲ್ಲದಷ್ಟು ರೋಚಕ.
ಕ್ಲೋಥೋ ಚೋದಕವನ್ನು ಉತ್ಪಾದಿಸಲು
ಕಾರಣವಾಗುವ ವಂಶವಾಹಿಯನ್ನು ಹೊಂದಿರದ ಇಲಿಯೊಂದನ್ನು ಪತ್ತೆ
ಮಾಡಿದ ಸಂಶೋಧನಾ ತಂಡ ಆ
ಇಲಿಗೆ ನಾಲ್ಕೇ ತಿಂಗಳಲ್ಲಿ ಅಕಾಲ
ಮುದಿತನ ಪ್ರಾಪ್ತಿಯಾದ್ದನ್ನು ಗಮನಿಸಿತು. ಎರಡು ವರ್ಷಗಳವರÉಗೆ
ಬದುಕ ಬೇಕಿದ್ದ ಆ ಇಲಿ
ಕೇವಲ ಆರೇ ತಿಂಗಳಲ್ಲಿ ಇಹಲೋಕ
ವ್ಯಾಪಾರ ಮುಗಿಸಿ ಟಾಟಾ ಹೇಳಿದಾಗ
ಡಾ| ಮಕಟೋರಂತಹ ಗಂಟುಮುಖದ ವಿಜ್ಞಾನಿಯೂ ಕುಣಿದು ಕುಪ್ಪಳಿಸಿಬಿಟ್ಟರು. ಇಲಿಗೆ
ಅಕಾಲ ಮರಣವಾದರೆ ಡಾ| ಮಕಟೋ ಏಕೆ
ಕುಣಿಯಬೇಕೆಂಬ ಅನುಮಾನ ಉಂಟಾದರೆ ಈ
ಲೇಖನದ ಮುಂದಿನ ಭಾಗವನ್ನು ನೀವು
ಓದುವ ಅವಶ್ಯಕತೆಯೇ ಇಲ್ಲ.
ಇಲ್ಲವಾದಲ್ಲಿ
ಡಾ| ಮಕಟೋ ಮತ್ತವರ ತಂಡ
ಮುಂದೇನು ಮಾಡಿರಬಹುದೆಂಬುದನ್ನು ನೀವು ಊಹಿಸಬಲ್ಲಿರಿ.
ಈ ತಂಡ ಆ
ನಂತರ ವಂಶವಾಹಿಗಳನ್ನು ಕಡಿದು, ಕತ್ತರಿಸಿ, ಬಾಗಿಸಿ,
ಬಗ್ಗಿಸಿ, ತಿರುಚಿ ಮತ್ತಿನ್ನೇನೋ ಮಾಡಿ
ಅತ್ಯಧಿಕ ಪ್ರಮಾಣದಲ್ಲಿ ಕ್ಲೋಥೋ ಹಾರ್ಮೋನನ್ನು ಉತ್ಪಾದಿಸುವ
ಇಲಿಗಳನ್ನು ಸೃಷ್ಟಿಸಿದರು. ಹೀಗೆ ನಮಗೆ ಬೇಕಾದಂತೆ
ವಂಶವಾಹಿಗಳನ್ನು ರಿಪೇರಿ ಮಾಡುವುದೇ ಜೆನೆಟಿಕ್
ಇಂಜಿನಿಯರಿಂಗ್. ಹೀಗೆ ಸೃಷ್ಟಿಸಲ್ಪಟ್ಟ ಗಂಡು
ಇಲಿಗಳ ಆಯಸ್ಸು ಶೇಕಡಾ 31 ರಷ್ಟು
ಹೆಚ್ಚಿತಂತೆ, ಹೆಣ್ಣು ಇಲಿಗಳಿಗೆ ಸಾಮಾನ್ಯ
ಹೆಣ್ಣು ಇಲಿಗಳಿಗಿಂತ ಶೇಕಡಾ 16ರಷ್ಟು ಹೆಚ್ಚಿನ
ಆಯಸ್ಸನ್ನು ಪಡೆಯಲಷ್ಟೇ ಸಾಧ್ಯವಾಯಿತಂತೆ!.
ಇನ್ನೇನು ದೀರ್ಘಾಯುಷ್ಯದ ಮಾತ್ರೆಗಳು
ಮಿರಿಮಿರಿ ಮಿಂಚುವ ಹೊದಿಕೆಗಳಲ್ಲಿ ಅಡಗಿಕೊಂಡು
ಮೆಡಿಕಲ್ ಸ್ಟೋರ್ಗಳಿಗೂ ಅನಂತರ
ಮನೆ - ಮನೆಗೂ ಬಂದೇ ಬಿಡುತ್ತದೆ
ಎಂದು ನೀವಂದುಕೊಳ್ಳುವ ಮೊದಲೇ ಕಹಿ ಸುದ್ಧಿಯೊಂದನ್ನು
ಹೇಳುತ್ತೇನೆ. ಅದೆಷ್ಟು ಕಹಿಯೆಂದರೆ ಸಿಹಿಯನ್ನು ಅಕ್ಷರಶಃ ನಮ್ಮಿಂದ ಕಸಿದುಕೊಳ್ಳುವಂತಹದು.
ಕ್ಲೋಥೋ ಹಾರ್ಮೋನಿನ ಪ್ರಮಾಣ ದೇಹದಲ್ಲಿ ಹೆಚ್ಚಿದರೆ
ಸಕ್ಕರೆ ಕಾಯಿಲೆಯುಂಟಾಗುವ ಸಾಧ್ಯತೆಯೂ ಹೆಚ್ಚಂತೆ! ಏಕೆಂದರೆ ಈ ಕ್ಲೋಥೋ
ಹಾರ್ಮೋನು ಇನ್ಸುಲಿನ್ ನಿರೋಧಕವಂತೆ.
ನೂರಕ್ಕಿಂತಲೂ ಹೆಚ್ಚು ವರ್ಷದಿಂದ ಈ
ಭೂಮಿಯ ಮೇಲೆ ಬದುಕಿಯೇ ಇರುವ
ದೀರ್ಘಾಯುಷಿಗಳಲ್ಲಿ ಈ ಕ್ಲೋಥೋ ಹಾರ್ಮೋನಿನ
ಪ್ರಮಾಣ ಎಷ್ಟಿದೆ ಎನ್ನುವುದು ಪತ್ತೆ
ಮಾಡುವಲ್ಲಿ ಈಗಾಗಲೇ ಸಂಶೋಧನಾ ತಂಡ
ನಿರತವಾಗಿದೆ. ಕ್ಲೋಥೋ ಹಾರ್ಮೋನಿನ ಸ್ರವಿಸುವಿಕೆಯ
ಪ್ರಮಾಣವನ್ನು ಹೆಚ್ಚುವಂತೆ ಮಾಡುವುದು ಅಥವಾ ಬಾಹ್ಯ ಮೂಲದಿಂದ
ಇದನ್ನು ಮಾನವ ದೇಹಕ್ಕೆ ಸೇರಿಸಿ
ಆಯುಷ್ಯವನ್ನು ವೃದ್ಧಿಯಾಗುವಂತೆ ಮಾಡುವುದು ಈ ತಂಡದ ಮುಂದಿನ
ಹೆಜ್ಜೆ.
ಇದು ಸಾಧ್ಯವಾದರೆ ಮುಂದಿನ
ತಲೆ ಮಾರಿನ ಜನರ ಆಯುಷ್ಯ
ವೃದ್ಧಿಸಬಹುದು. ಆ ಹೆಚ್ಚಿದ ಆಯುಷ್ಯವಿಡೀ
ಸಕ್ಕರೆ ಕಾಯಿಲೆಯಿಂದ ಬಳಲುವಂತಾಗಲೂಬಹುದು!.
-ಉದಯ ಗಾಂವಕಾರ
(ಜನಪ್ರತಿನಿಧಿ ವಾರಪತ್ರಿಕೆಯ ಜನ ವಿಜ್ಞಾನ ಅಂಕಣದಲ್ಲಿ ಬಹಳ ಹಿಂದೆ ಪ್ರಕಟವಾದ ಲೇಖನ.ಇನ್ನುಳಿದ ಸುಮಾರು ನೂರಕ್ಕಿಂತಲೂ ಹೆಚ್ಚು ಲೇಖನಗಳನ್ನು ಸದ್ಯದಲ್ಲೇ ಈ ಬ್ಲಾಗಿಗೆ ಹಂತ-ಹಂತವಾಗಿ post ಮಾಡಲಾಗುವುದು.)
-ಉದಯ ಗಾಂವಕಾರ
(ಜನಪ್ರತಿನಿಧಿ ವಾರಪತ್ರಿಕೆಯ ಜನ ವಿಜ್ಞಾನ ಅಂಕಣದಲ್ಲಿ ಬಹಳ ಹಿಂದೆ ಪ್ರಕಟವಾದ ಲೇಖನ.ಇನ್ನುಳಿದ ಸುಮಾರು ನೂರಕ್ಕಿಂತಲೂ ಹೆಚ್ಚು ಲೇಖನಗಳನ್ನು ಸದ್ಯದಲ್ಲೇ ಈ ಬ್ಲಾಗಿಗೆ ಹಂತ-ಹಂತವಾಗಿ post ಮಾಡಲಾಗುವುದು.)
Monday, 10 June 2013
ವೈದ್ಯನಾಗಲು ಬಯಸಿರುವ ರಂಜಿತಕುಮಾರ


ಮನೆಯಲ್ಲಿ ಬಡತನವಿದೆ.ಅಪ್ಪ-ಅಮ್ಮ ಕೂಲಿ ಮಾಡುತ್ತಾರೆ.ಆದರೆ,ಗೌರವದ ಬದುಕನ್ನು ನಡೆಸುತ್ತಿದ್ದಾರೆ.ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ.ಒಬ್ಬ ಮಗನ ಹೆಸರು ರಂಜಿತಕುಮಾರ.ಕನ್ನಡ ಮಾಧ್ಯಮದಲ್ಲೇ ಎಸ್ ಎಸ್ ಎಲ್ ಸಿ ವರೆಗೆ ಓದಿದ್ದು,ಪಿ ಯುಸಿ ವಿಜ್ಞಾನ ನಾವುಂದದ ಸರ್ಕಾರಿ ಕಾಲೇಜಿನಲ್ಲಿ.ದ್ವಿತೀಯ ಪಿ ಯು ನಲ್ಲಿ 568 ಅಂಕಗಳು(93.28%) ಭೌತಶಾಸ್ತ್ರ 99,ರಸಾಯನಶಾಸ್ತ್ರ 100,ಗಣಿತ 97,ಜೀವಶಾಸ್ತ್ರ 94..
ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲಿ ಈ ತಾಲೂಕಿಗೇ ಪ್ರಥಮಿಗ. ವೈದ್ಯನಾಗಬೇಕೆಂಬ ಈತನ ಆಸೆಯನ್ನು ಸಹೃದಯಿಗಳು ಪೋಷಿಸಬಹುದೇ? ಅಭಿನಂದನೆ ತಿಳಿಸುವುದಿದ್ದರೆ ಈ ನಂಬರಿಗೆ ಕರೆಮಾಡಿ-7760348194 ಮಾಹಿತಿ ಜನಪ್ರತಿನಿಧಿ 6/6/2013
Tuesday, 23 April 2013
ನೆನಪುಗಳು ಚಿತ್ರವಾಗಿ..
ಕಾ.ತ ಚಿಕ್ಕಣ್ಣ ಮತ್ತು ಗೀತಾ ನಾಗಭೂಷಣ ನಮ್ಮ ಮನೆಗೆ ಬಂದಿದ್ದಾಗ ..ಬಹಳ ವರ್ಷ ಹಿಂದಿನ ನೆನಪು.
ಸಮುದಾಯದ ಒಂದು ಕಾರ್ಯಕ್ರಮಕ್ಕಾಗಿ ನಾನು ರಚಿಸಿದ ಕಲಾಕೃತಿ.
ಪ್ರಾರ್ಥನಾಳ ಇತ್ತೀಚಿನ ಫೋಟೋ
ಸಂಧ್ಯಾ,ಮಗಳು ಪ್ರಾರ್ಥನಾ ,ತಂಗಿಯ ಮಗಳು ಸಾಗರಿಯೊಂದಿಗೆ
ಕಿಟಕಿಯಾಚೆಯ ನೋಟ-ಪ್ರಾರ್ಥನಾ
ಪ್ರಾರ್ಥನಾಳ ಫ್ಯಾನ್ಸಿ ಡ್ರೆಸ್ಸಮುದಾಯದ ಒಂದು ಕಾರ್ಯಕ್ರಮಕ್ಕಾಗಿ ನಾನು ರಚಿಸಿದ ಕಲಾಕೃತಿ.
ಡಿ.ವೈ.ಎಫ್.ಐ ಕಾರ್ಯಕ್ರಮಕ್ಕಾಗಿ ರಚಿಸಿದ ಈ ಹಿನ್ನೆಲೆ ಹೇಗಿದೆ?
ನೆನಪುಗಳು ಚಿತ್ರವಾಗಿ..
ಕಾ.ತ ಚಿಕ್ಕಣ್ಣ ಮತ್ತು ಗೀತಾ ನಾಗಭೂಷಣ ನಮ್ಮ ಮನೆಗೆ ಬಂದಿದ್ದಾಗ ..ಬಹಳ ವರ್ಷ ಹಿಂದಿನ ನೆನಪು.
ಸಮುದಾಯದ ಒಂದು ಕಾರ್ಯಕ್ರಮಕ್ಕಾಗಿ ನಾನು ರಚಿಸಿದ ಕಲಾಕೃತಿ.
ಸಂಧ್ಯಾ,ಮಗಳು ಪ್ರಾರ್ಥನಾ ,ತಂಗಿಯ ಮಗಳು ಸಾಗರಿಯೊಂದಿಗೆ
ಕಿಟಕಿಯಾಚೆಯ ನೋಟ-ಪ್ರಾರ್ಥನಾ
ಪ್ರಾರ್ಥನಾಳ ಫ್ಯಾನ್ಸಿ ಡ್ರೆಸ್ಸಮುದಾಯದ ಒಂದು ಕಾರ್ಯಕ್ರಮಕ್ಕಾಗಿ ನಾನು ರಚಿಸಿದ ಕಲಾಕೃತಿ.
ಡಿ.ವೈ.ಎಫ್.ಐ ಕಾರ್ಯಕ್ರಮಕ್ಕಾಗಿ ರಚಿಸಿದ ಈ ಹಿನ್ನೆಲೆ ಹೇಗಿದೆ?
ಪ್ರಾರ್ಥನಾಳ ಇತ್ತೀಚಿನ ಫೋಟೋFriday, 15 March 2013
Sultan Tippu-Play by samudaya Kundapura
Monday, 11 February 2013
ಕನ್ನಡಕ್ಕೆ ಮೊದಲು ಬಂದ ಸಾಯಿನಾಥ್ ಕೃತಿಗೆ ಮುಖಪುಟ ರಚಿಸಿದ ಹೆಮ್ಮೆಯಿಂದ...
ಕನ್ನಡಕ್ಕೆ ಮೊದಲು ಬಂದ ಸಾಯಿನಾಥ್ ಕೃತಿ
ಪಿ ಸಾಯಿನಾಥ್ ಮೊದಲ ಬಾರಿ ಕನ್ನಡಕ್ಕೆ ಬಂದಿದ್ದಾರೆ. ಅವರು ರೈತರ ಕುರಿತು ‘ದಿ ಹಿಂದೂ’ ಪತ್ರಿಕೆಗೆ ಬರೆದ ಸರಣಿ ಲೇಖನಗಳಲ್ಲಿ ಕೆಲವನ್ನು ಅನುವಾದ ಮಾಡಿ ಪ್ರಕಟಿಸಲಾಗಿದೆ. ಟಿ ಎಲ್ ಕೃಷ್ಣೇಗೌಡ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು. ಅವರು ಲೇಖನಗಳನ್ನು ಅನುವಾದಿಸಿದ್ದಾರೆ. ‘ಚಿಂತನ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ. ಪುಸ್ತಕಕ್ಕೆ ಕೃಷ್ಣೇಗೌಡ ಅವರು ಬರೆದ ಮಾತುಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.-ಟಿ ಎಲ್ ಕೃಷ್ಣೇಗೌಡ
ಪಿ. ಸಾಯಿನಾಥ್ ಅವರು ಭಾರತೀಯ ಮಾದ್ಯಮಲೋಕದ ಮಿಂಚು. ಆ ಮಿಂಚು ಉಳ್ಳವರ ಸಿರಿವಂತಿಕೆಯನ್ನು ವಿಜೃಂಭಿಸುವ ಅಲಂಕಾರ ದೀಪವಲ್ಲ. ದುಡಿದು-ದಣಿದ ಕೋಟ್ಯಾಂತರ ಮಂದಿಯ ಸಂಕಟವನ್ನು ನೋಡಿದ,ನೋಡುತ್ತಿರುವ ಕಂದೀಲು. ಗ್ಲಾಮರ್ ಜಗತ್ತಿನ ಪ್ರಖರ ಬೆಳಕಿಗೆ ಕಣ್ಣು ಕುಕ್ಕದವರ ಕಣ್ತೆರೆವ ದಾರಿ ತೋರುವ ಹಣತೆ.ಮಾದ್ಯಮರಂಗ ಕಂಪನೀಕರಣಗೊಂಡು ಎಲ್ಲವೂ ಲಾಭಕ್ಕಾಗಿಯೇ ಎನ್ನುವಂತಾಗಿರುವ ಈ ಸಂದರ್ಭದಲ್ಲಿ, ಅಂತಹ ತಾಳಕ್ಕೆ ಹೆಜ್ಜೆ ಇಡುತ್ತಿರುವ ಅಸಂಖ್ಯ ಪತ್ರಕರ್ತರ ನಡುವೆ ಪಿ. ಸಾಯಿನಾಥ್ ಭಿನ್ನ. ಅವರ ಬರಹಗಳು ದಿನಪತ್ರಿಕೆಗಳಲ್ಲಿ ಇಂದಿನ ವಿದ್ಯಮಾನಗಳಿಗೆ ಸ್ಪಂದಿಸುತ್ತಾ, ಇತರ ಅಂದಿನ ತಾಜಾ ಸುದ್ದಿಗಳ ಜತೆ ಸ್ಥಾನ ಗಳಿಸಲು ಪೈಪೋಟಿಯಲ್ಲಿ ಗೆಲ್ಲುತ್ತವೆ. ಆದರೆ ಅವು ಹಲವು ವರ್ಷಗಳ ನಂತರವೂ ಪ್ರಸ್ತುತವಾಗಿದ್ದು ಓದುಗರು ಅವನ್ನು ಹುಡುಕಿಕೊಂಡು ಹೋಗುವಂತೆ ಇರುತ್ತವೆ ಅವರ ಬರಹಗಳು. ಹಾಗಂತ ಅವರ ಬರಹದ ವಸ್ತುಗಳಲ್ಲಿ ವೈವಿಧ್ಯತೆಗೆ ಕಡಿಮೆ ಇಲ್ಲ. ರೈತರ ಬವಣೆಗಳು, ಕೃಷಿ ಬಿಕ್ಕಟ್ಟಿನ ಹಲವು ಆಯಾಮಗಳು, ಸಕರ್ಾರದ ನೀತಿಗಳು, ಬಜೆಟ್, ಚುನಾವಣಾ ವಿಶ್ಲೇಷಣೆ, ಅಮೆರಿಕದ ರಾಜಕೀಯ ಬದಲಾವಣೆ – ಎಲ್ಲಾ ಅವರ ಬರಹಗಳ ವಸ್ತು.
ನಾವು ಈ ಪುಸ್ತಕಕ್ಕೆ ಆರಿಸಿಕೊಂಡಿರುವ ಲೇಖನ-ವರದಿಗಳೂ ಮುಖ್ಯವಾಗಿ ಕೃಷಿ ಬಿಕ್ಕಟ್ಟು ಮತ್ತು ರೈತರ ಬವಣೆಗಳ ಸುತ್ತ ಇರುವವು. ನಮ್ಮ ನಾಡಿನ ಬಹು ಸಂಖ್ಯಾತ ಕೂಲಿಕಾರರ, ರೈತರ, ಕುಶಲಕಮರ್ಿಗಳ ದಾರುಣ ಬದುಕನ್ನು ಕಟ್ಟಿಕೊಟ್ಟಿರುವಂತಹವೇ. ದೇಶದ ಮೂಲೆ-ಮೂಲೆಗಳಲ್ಲಿ ಸಾವಿರಾರು ಮೈಲಿ ತಿರುಗಿ ಜನರ ಸಂಕಷ್ಟಗಳನ್ನು ನೋಡಿ, ಅವರ ಕಣ್ಣೀರು, ನಿಟ್ಟುಸಿರು, ಹತಾಶೆಗಳಿಗೆ ಅಕ್ಷರ ರೂಪ ಕೊಟ್ಟಂತಹವು. ನೀರಿನ ಖಾಸಗೀಕರಣದ ನಂತರ ಒರಿಸ್ಸಾ ರೈತರ ಪಾಡು, ವ್ಯಾಪಾರಿಗಳು- ಸಕರ್ಾರದ ಕಪಿಮುಷ್ಠಿಯಲ್ಲಿ ಹರಿದ ಛತ್ರಿಯಂತಾದ ವಿದರ್ಭದ ಹತ್ತಿಬೆಳೆಗಾರರು, ಬೊಗಸೆ ನೀರಿಗಾಗಿ ಭೂಮಿಯನ್ನೆಲ್ಲಾ ತೂತು ಮಾಡಿ ಹತಾಶರಾದ ಆಂದ್ರದ ರೈತರು, ದೇವಸ್ಥಾನಗಳ ಕಾಣಿಕೆ ಸಲ್ಲಿಸಲೂ ಶಕ್ತರಲ್ಲದ ವಯನಾಡಿನ ಮೆಣಸು-ಬೆಳೆಗಾರರು… ಹೀಗೆ ಸಾಯಿನಾಥ್ ಅವರು ಸಮಸ್ಯೆಗಳನ್ನು ಗಾಜಿನ ಮನೆಯಿಂದ ನೋಡದೆ ಅಲ್ಲಿಗೇ ಹೋದರು, ಅನುಭವಿಸಿದರು, ಬರೆದರು. ಈ ಲೇಖನಗಳು ಬೇರೆ-ಬೇರೆ ಸಂದರ್ಭದಲ್ಲಿ, ಕೆಲವು ಬಹಳ ಹಿಂದೆ ಪ್ರಕಟವಾದದ್ದಾದರೂ ಅವುಗಳನ್ನು ಅನುವಾದಿಸಲು ಆರಿಸಿಕೊಂಡ ಕಾರಣ ಅವುಗಳಿಗಿರುವ ಪ್ರಸ್ತುತತೆ.
ಪಿ. ಸಾಯಿನಾಥ್ರವರ ಇಂಗ್ಲೀಷ್ ಬರಹಗಳನ್ನು ಓದುವಾಗ ಎಷ್ಟೊಂದು ಸರಳವಾಗಿದೆ ಅನಿಸುತ್ತದೆ. ಆದರೆ ಹರಿತವಾದ, ನಿಖರವಾದ ಮಂಡಣೆ, ಮೊನಚಾದ ವ್ಯಂಗ್ಯ, ಶಬ್ದಗಳ ಕಸರತ್ತಿನಲ್ಲಿ ಹೊಸ ಅರ್ಥ ಹೊರಡಿಸುವ ಅವರ ಶೈಲಿ ಸಂಕೀರ್ಣ. ಅವರ ಲೇಖನವನ್ನು ಯಥಾವತ್ತಾಗಿ ಕನ್ನಡಕ್ಕೆ ಭಾಷಾಂತರಿಸುವುದು ಕಷ್ಟ. ಹೆಚ್ಚು ಕಡಿಮೆ ಅಸಾಧ್ಯ ಎನ್ನಬಹುದು. ಆದ್ದರಿಂದ ಅವರ ಬರಹಗಳನ್ನು ಕನ್ನಡಕ್ಕೆ ತರುವಾಗ ಭಾವಾನುವಾದದ ಮಾರ್ಗ ಹಿಡಿದಿದ್ದೇನೆ. ವಾಕ್ಯವಾರಾಗಿ ಅನುವಾದಕ್ಕೆ ನಿಲ್ಲದೆ ಅವರ ಹೇಳಿಕೆಯ ತಿರುಳನ್ನು ಕನ್ನಡದಲ್ಲಿ ಅದರ ಮೂಲ ಭಾವಕ್ಕೆ ಚ್ಯುತಿ ಬರದಂತೆ ಸೆರೆ ಹಿಡಿಯಲು ಪ್ರಯತ್ನಿಸಿದ್ದೇನೆ. ಕೆಲವು ದಿನಗಳಲ್ಲಿ ಮಾಡಿ ಮುಗಿಸಿ ಬಿಡುತ್ತೇನೆ ಎಂದು ಕೊಂಡದ್ದು ತಿಂಗಳುಗಳು ತೆಗೆದುಕೊಂಡಿತು.
ಹಲವು ಬಾರಿ ಬರೆದ್ದನ್ನು ತಿದ್ದಬೇಕಾಯಿತು. ಇವೆಲ್ಲದರ ನಂತರ ಪಿ. ಸಾಯಿನಾಥ್ರವರ ಭಾವವನ್ನು ಕನ್ನಡದಲ್ಲಿ ತರಲು ಎಷ್ಟರ ಮಟ್ಟಿಗೆ ಸಫಲನಾಗಿದ್ದೇನೆ ಎಂದು ಓದುಗರು ಹೇಳಬೇಕು.
ಕೊನೆಯದಾಗಿ, 1998ನೇ ಇಸವಿ, ಮಂಡ್ಯದಲ್ಲಿ ವಿಶ್ವೇಶ್ವರಯ್ಯನವರ ಕುರಿತು ವಿಚಾರ ಸಂಕಿರಣವೊಂದನ್ನು ಸಂಘಟಿಸಲಾಗಿತ್ತು. ಅದರ ಸ್ಮರಣ-ಸಂಚಿಕೆಗೆ ಹಲವು ದಿಗ್ಗಜರು ಇಂಗ್ಲೀಷ್ ಭಾಷೆಯಲ್ಲಿ ಲೇಖನಗಳನ್ನು ಕಳುಹಿಸಿದ್ದರು. ಸ್ಮರಣ ಸಂಚಿಕೆಯನ್ನು ಮುದ್ರಿಸುವ ಜವಾಬ್ದಾರಿ ನನ್ನದೇ ಆಗಿದ್ದರಿಂದ ಲೇಖನಗಳ ಅನುವಾದಕ್ಕೆ ಎಷ್ಟು ಪಾಡು ಪಟ್ಟರೂ ಯಾರೂ ಸಿಗಲಿಲ್ಲ. ಈ ವಿಷಯವನ್ನು `ಪ್ರೀತಿಯ ಮಾಸ್ಟ್ರು’ ದಿವಂಗತ ಸಂಗಾತಿ ಪಿ. ರಾಮಚಂದ್ರರಾಯರಿಗೆ ತಿಳಿಸಿ ಸಹಾಯ ಕೇಳಿದಾಗ `ನೀನೇ ಮಾಡು ನೋಡುವ’ ಎಂದು ಹೇಳಿ ಅನುವಾದದ ನೇಗಿಲು ಕಟ್ಟಿಸಿದರು. ಅನುವಾದ ಮಾಡಬಲ್ಲೆ. ಕನ್ನಡದಲ್ಲಿ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ತುಂಬಿದ ಪಿ.ರಾಮಚಂದ್ರರಾಯರಿಗೆ ನನ್ನ ಅನಂತ ಧನ್ಯವಾದಗಳು. ಅದರ ನಂತರ ಹಲವು ಲೇಖನ ವರದಿಗಳನ್ನು ಬರೆಯುತ್ತಾ ಬಂದಿದ್ದೇನೆ. ಚಿಂತನ ಪುಸ್ತಕ ರೈತರ ಬವಣೆ ಮತ್ತು ಕೃಷಿ ಬಿಕ್ಕಟ್ಟಿನ ಬಗೆಗಿನ ಪಿ.ಸಾಯಿನಾಥರ ಲೇಖನಗಳನ್ನು ಆಯ್ಕೆ ಮಾಡಿ ಕನ್ನಡಕ್ಕೆ ತರಲು ಕೇಳಿಕೊಂಡಾಗ ಭಯ, ಸಂಭ್ರಮ ಎರಡೂ ಆಯ್ತು. ಒಂದು ಸವಾಲನ್ನಾಗಿ ಸ್ವೀಕರಿಸಿ ಅದರಲ್ಲಿ ತೊಡಗಿಸಿಕೊಂಡೆ. ರೈತ ಚಳುವಳಿಯಲ್ಲಿ ತೊಡಗಿಸಿ ಕೊಂಡಿರುವ ನನಗೆ ಇದು ನನ್ನ ಕರ್ತವ್ಯ ಸಹ ಎನ್ನಿಸಿತು. ಕೃಷಿ ಬಿಕ್ಕಟ್ಟಿನ ಹಲವು ಆಯಾಮಗಳ ಬಗ್ಗೆ, ರೈತರ ಬವಣೆಗಳ ಬಗ್ಗೆ, ಅದರ ಹಿಂದಿರುವ ತಪ್ಪು ಕೃಷಿ ನೀತಿಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳ ತೀವ್ರ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ಈ ಪುಸ್ತಕ ತುಂಬಿದೆ. ಆ ನಿಟ್ಟಿನಲ್ಲಿ ನನ್ನ ಕಿರುಕಾಣಿಕೆ ಬಗ್ಗೆ ನನಗೆ ಹೆಮ್ಮೆ ಎನ್ನಿಸುತ್ತಿದೆ.
ಇದನ್ನು ಪುಸ್ತಕವಾಗಿ ಹೊರ ತರುತ್ತಿರುವ ಚಿಂತನ ಪುಸ್ತಕ ಬಳಗದವರಿಗೆ; ಉತ್ತಮ ಮುನ್ನುಡಿ ಬರೆದು ಕೊಟ್ಟ ಖ್ಯಾತ ಲೇಖಕ ನಾಗೇಶ ಹೆಗಡೆಯವರಿಗೆ: ಸುಂದರ ಮುಖಪುಟ ಮತ್ತು ಪುಸ್ತಕ ವಿನ್ಯಾಸ ಮಾಡಿದ ಉದಯ ಗಾಂವಕಾರ ಅವರಿಗೆ; ಸುಂದರವಾಗಿ ಮುದ್ರಣ ಮಾಡಿದ ಚಂದ್ರು ಮತ್ತು ಕ್ರಿಯಾ ಮುದ್ರಣದ ಗೆಳೆಯರಿಗೆ – ನನ್ನ ಕೃತಜ್ಞತೆಗಳು.
Subscribe to:
Posts (Atom)

ಅಪ್ಪ ಅಮ್ಮ ಮೊಮ್ಮಗಳು ಪ್ರಾರ್ಥನಾಳೊಂದಿಗೆ..
