ಮನೆಯಲ್ಲಿ ಬಡತನವಿದೆ.ಅಪ್ಪ-ಅಮ್ಮ ಕೂಲಿ ಮಾಡುತ್ತಾರೆ.ಆದರೆ,ಗೌರವದ ಬದುಕನ್ನು ನಡೆಸುತ್ತಿದ್ದಾರೆ.ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ.ಒಬ್ಬ ಮಗನ ಹೆಸರು ರಂಜಿತಕುಮಾರ.ಕನ್ನಡ ಮಾಧ್ಯಮದಲ್ಲೇ ಎಸ್ ಎಸ್ ಎಲ್ ಸಿ ವರೆಗೆ ಓದಿದ್ದು,ಪಿ ಯುಸಿ ವಿಜ್ಞಾನ ನಾವುಂದದ ಸರ್ಕಾರಿ ಕಾಲೇಜಿನಲ್ಲಿ.ದ್ವಿತೀಯ ಪಿ ಯು ನಲ್ಲಿ 568 ಅಂಕಗಳು(93.28%) ಭೌತಶಾಸ್ತ್ರ 99,ರಸಾಯನಶಾಸ್ತ್ರ 100,ಗಣಿತ 97,ಜೀವಶಾಸ್ತ್ರ 94..
ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲಿ ಈ ತಾಲೂಕಿಗೇ ಪ್ರಥಮಿಗ. ವೈದ್ಯನಾಗಬೇಕೆಂಬ ಈತನ ಆಸೆಯನ್ನು ಸಹೃದಯಿಗಳು ಪೋಷಿಸಬಹುದೇ? ಅಭಿನಂದನೆ ತಿಳಿಸುವುದಿದ್ದರೆ ಈ ನಂಬರಿಗೆ ಕರೆಮಾಡಿ-7760348194 ಮಾಹಿತಿ ಜನಪ್ರತಿನಿಧಿ 6/6/2013
No comments:
Post a Comment