ನಾರಾಯಣ ಗಾಂವಕಾರ, ಪಡುವಣಿ
NARAYANA GAONKAR |
ತಂದೆ: ಅನಂತ ಗಾಂವಕಾರ
ತಾಯಿ: ಸಣ್ಣಮ್ಮ ಗಾಂವಕಾರ
ಜನನ: 10 ಮೇ 1940
ಶಿಕ್ಷಣ: ಮೆಟ್ರಿಕ್
ಯಕ್ಷರಂಗಕ್ಕೆ ಪಾದಾರ್ಪಣೆ: ತನ್ನ 14 ನೇ
ವಯಸ್ಸಿನಲ್ಲಿ 1954 ರಲ್ಲಿ
ಮೊದಲ ಪಾತ್ರ: ಅಭಿಮನ್ಯು
ಪ್ರಾರಂಭಿಕ ಗುರುಗಳು: ದಿ. ಶಿವರಾಮ
ಹೆಗಡೆ, ಬಾಡ ಮತ್ತು ದಿ. ಪರಮಯ್ಯ ಪಟಗಾರ, ಪಡುವಣಿ
ಹೆಸರು ತಂದ ಪಾತ್ರಗಳು: ಹನುಮಂತ
(ಮಾರುತಿ ಪ್ರತಾಪ), ಶುಕ್ರಾಚಾರ್ಯ(ಕಚ ದೇವಯಾನಿ),
ನಾರಾಯಣ ಗಾಂವಕಾರರ ಸಂದರ್ಶನ
ಸಂಸದರ್ಶಕರು ಬೊಮ್ಮಯ್ಯ ಗಾಂವಕಾರ, ಉಪನ್ಯಾಸಕರು
ಮತ್ತು ಹೆಸರಾಂತ ಭಾಗವತರು
ಪ್ರಶ್ನೆ:ನಿಮ್ಮ ಮೆಚ್ಚಿನ ಓರಿಗೆಯ
ಕಲಾವಿದರಾರು?
ಉತ್ತರ: ದಿ. ಪರಮಯ್ಯ ಹಾಸ್ಯಗಾರ, ದಿ.
ಬಳ್ಕೂರು ಜುಟ್ಟು ನಾಯ್ಕ, ದಿ. ಧಾರೇಶ್ವರ ಮಾಸ್ತರ, ದಿ. ಶಿವಾನಂದ ಭಂಡಾರಿ, ಶ್ರೀ ಅನಂತ ಹೆಗಡೆ
ಹಾವಗೋಡಿ, ಶ್ರೀ ರಾಮ ಮಾಸ್ತರ ಮುಂತಾದವರು
ಪ್ರಶ್ನೆ: ನೀವು ಮೆಚ್ಚಿಕೊಂಡ
ಕಲಾವಿದರು?
ಉತ್ತರ: ದಿ.ದೇವರು ಹೆಗಡೆ, ದಿ.ಎಕ್ಟರ್
ಜೋಷಿ, ದಿ.ವೀರಭದ್ರ ನಾಯ್ಕ, ದಿ. ಜಗನ್ನಾಥ ಶೆಟ್ಟಿ, ದಿ. ಶಂಭು ಹೆಗಡೆ, ದಿ. ವೆಂಕಟರಮಣ ನಾಯಕ,
ಹಿರೇಗುತ್ತಿ, ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀ ಜಲವಳ್ಳಿ ವೆಂಕಟೇಶ್ ರಾವ್. ದಿ.
ಗೋವಿಂದ ನಾಯ್ಕ್, ದಿ. ಎಂ ಎಂ ನಾಯಕ ಇತ್ಯಾದಿ
ಪ್ರಶ್ನೆ: ಯಾವ ಯಾವ ಬಯಲಾಟ ಮೇಳಗಳಲ್ಲಿ
ನೀವು ಅಭಿನಯಿಸಿದ್ದೀರಿ?
ಉತ್ತರ: ಹಾಸ್ಯಗಾರ ಮೇಳ, ಕರ್ಕಿ,
ಜೋಗನಕಟ್ಟೆ ಮೇಳ ಹಳದೀಪುರ, ಶ್ರೀ ರಾಮನಾಥ ಯಕ್ಷಗಾನ ಮಂಡಳಿ, ಕುಮಟಾ, ಶ್ರೀ ಶಾಂತಿಕಾ ಪರಮೇಶ್ವರಿ
ಯಕ್ಷಗಾನ ಮಂಡಳಿ, ಹೆಗಡೆ, ಇನ್ನೂ ಅನೇಕ..
No comments:
Post a Comment